E Shram Card apply: ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣ ಪಡೆಯಿರಿ.! ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ನೀವು ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು ಹಾಗೂ ಈ ಯೋಜನೆಯಿಂದ 3000 ಹಣ ಯಾವಾಗ ಬರುತ್ತೆ ಎಂಬ ಪ್ರತಿಯೊಂದು ಮಾಹಿತಿಯನ್ನು ಈ ಒಂದು ಲೇಖನೆಯ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಇ- ಶ್ರಮ್ ಕಾರ್ಡ್(E Shram Card apply) ..?
ಸ್ನೇಹಿತರೆ ಕೇಂದ್ರ ಸರ್ಕಾರ ಇ- ಶ್ರಮ್ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ತಿಂಗಳಿಗೆ 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ ಹಾಗಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿಯೊಬ್ಬರು ಲಾಭ ಪಡೆದುಕೊಳ್ಳಿ.! ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ 60 ವರ್ಷ ದಾಟಿದ ನಂತರ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ₹3,000 ಹಣವನ್ನು ಅರ್ಜಿ ಸಲ್ಲಿಸಿದಂತ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ

ಆದ್ದರಿಂದ ಈ ಒಂದು ಲೇಖನ ಮೂಲಕ ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳನ್ನು ಹಾಗೂ ಈ ಯೋಜನೆಯ ಪ್ರಮುಖ ಉದ್ದೇಶವೇನು ಮತ್ತು ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ಮುಂತಾದ ವಿವರಗಳನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನಿಯನ್ನು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಇ- ಶ್ರಮ್ ಕಾರ್ಡ್ ಉಪಯೋಗಗಳು (E Shram Card apply)..?
ತಿಂಗಳಿಗೆ 3000 ಹಣ ಸಿಗುತ್ತೆ:- ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಇ- ಶ್ರಮ್ ಕಾರ್ಡ್ ಯೋಜನೆಯ ಪ್ರಮುಖ ಉಪಯೋಗ ಅಥವಾ ಲಾಭವೇನೆಂದರೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣವನ್ನು 60 ವರ್ಷ ದಾಟಿದ ನಂತರ ಪಿಂಚಣಿ ರೂಪದಲ್ಲಿ ಈ ಯೋಜನೆಯ ಮೂಲಕ ಅರ್ಜಿದಾರರು ಪಡೆದುಕೊಳ್ಳಬಹುದು ಮತ್ತು ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 60 ವರ್ಷ ದಾಟಿದ ನಂತರ ತಿಂಗಳಿಗೆ 6000 ಹಣವನ್ನು ಇಬ್ಬರು ಪಡೆದುಕೊಳ್ಳಬಹುದು
2 ಲಕ್ಷದವರೆಗೆ ಅಪಘಾತ ವಿಮೆ:- ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ- ಶ್ರಮ್ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಯಾವುದೇ ಸಂದರ್ಭದಲ್ಲಿ ಅಥವಾ ಅಪಘಾತ ಉಂಟಾದ ಸಂದರ್ಭದಲ್ಲಿ ನಿದಾನ ಹೊಂದಿದ್ದರೆ ಅಥವಾ ಮರಣ ಹೊಂದಿದ್ದರೆ ಅರ್ಜಿದಾರರ ನಾಮಿನಿ ಅಥವಾ ಕುಟುಂಬದ ಸದಸ್ಯರಿಗೆ 2 ಲಕ್ಷ ರೂಪಾಯಿವರೆಗೆ ಅಪಘಾತ ವಿಮೆಯನ್ನು ನೀಡಲಾಗುತ್ತದೆ.
1 ಲಕ್ಷದವರೆಗೆ ಆರ್ಥಿಕ ನೆರವು:- ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಇ- ಶ್ರಮ್ ಕಾರ್ಡ್ ಪ್ರಮುಖ ಉಪಯೋಗ ಅಥವಾ ಲಾಭವೇನೆಂದರೆ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರು ಕೆಲಸದ ಸಂದರ್ಭದಲ್ಲಿ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಅಪಘಾತ ಉಂಟಾದಾಗ ಅಂಗವಿಕಲ್ಲೇ ಅಥವಾ ಅಂಗವಿಕಲತೆ ಉಂಟಾದರೆ ಅಥವಾ ವೈದ್ಯಕೀಯ ವೆಚ್ಚಕ್ಕೆ ಒಂದು ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ
ಇ- ಶ್ರಮ್ ಕಾರ್ಡ್ ಗೆ ಯಾರು ಅರ್ಜಿ ಸಲ್ಲಿಸಬಹುದು..?
ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶ್ರಮಿಕ ಕಾರ್ಡ್ ಅಥವಾ ಇ- ಶ್ರಮ್ ಕಾರ್ಡ್ ಯೋಜನೆಗೆ ನಮ್ಮ ಭಾರತ ದೇಶದಲ್ಲಿ ವಾಸ ಮಾಡುವಂಥ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ಮಾಡುವಂತಹ ಕೆಲಸಗಾರರು ಮತ್ತು ರೈತರು ಹಾಗೂ ಖುಷಿ ಕೂಲಿ ಕಾರ್ಮಿಕರು ಮತ್ತು ಇತರ ಅಸಂಘಟಿತ ವಲಯದ ಕಾರ್ಮಿಕರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ನೀವು ಕೂಲಿ ಕಾರ್ಮಿಕರು ಅಥವಾ ಯಾವುದೇ ನಿರ್ದಿಷ್ಟ ಸಂಬಳ ತಿಂಗಳಿಗೆ ಬರದೇ ಇದ್ದಲ್ಲಿ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಇ- ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಾರ್ಷಿಕ ಆದಾಯ 2.50 ಲಕ್ಷದ ಒಳಗಡೆ ಇರಬೇಕು
- ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಆಗಿರಬೇಕು ಅಥವಾ ದಿನಗೂಲಿ ಕಾರ್ಮಿಕರು ಅಥವಾ ರೈತರು ಅಥವಾ ಕೃಷಿ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಮತ್ತು 59 ವರ್ಷದ ಒಳಗಿನವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
- ಈ ಯೋಜನೆಗೆ ಸರ್ಕಾರಿ ಉದ್ಯೋಗಿಗಳು ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಪಾನ್ ಕಾರ್ಡ್
- ವೋಟರ್ ಐಡಿ
- ರೇಷನ್ ಕಾರ್ಡ್
- ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್
- ಇತರೆ ಅಗತ್ಯ ದಾಖಲಾತಿಗಳು
ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಕೂಲಿ ಕಾರ್ಮಿಕರು ಅಥವಾ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಅಥವಾ ದಿನಗೂಲಿ ಕಾರ್ಮಿಕರು ಆಗಿದ್ದರೆ ನೀವು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣವನ್ನು 60 ವರ್ಷ ದಾಟಿದ ನಂತರ ಪಿಂಚಣಿ ರೂಪದಲ್ಲಿ ನೀವು ಪಡೆದುಕೊಳ್ಳಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ಲಿಂಕನ್ನು ಕೆಳಗಡೆ ನೀಡಿದ್ದೇವೆ ಅದನ್ನು ಬಳಸಿಕೊಂಡು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ https://eshram.gov.in/
ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಹಾಗೂ ಕರ್ನಾಟಕ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಮಾಹಿತಿ ಪಡೆಯಬೇಕಾದರೆ ಬೇಗ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಂ ಚಾನಲ್ಗೆ ಸೇರಿಕೊಳ್ಳಿ