PM Awas Yojana: ಪಿಎಂ ಆವಾಸ್ ಯೋಜನೆ ಅರ್ಜಿ ಪ್ರಾರಂಭ.! ಉಚಿತ ಮನೆ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

PM Awas Yojana: ಪಿಎಂ ಆವಾಸ್ ಯೋಜನೆ ಅರ್ಜಿ ಪ್ರಾರಂಭ.! ಉಚಿತ ಮನೆ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನೀವು ಮನೆ ಕಟ್ಟಿಸಲು ಬಯಸುತ್ತಿದ್ದೀರಾ ಹಾಗೂ ಮನೆ ಕಟ್ಟಿಸಲು ಸರ್ಕಾರ ಕಡೆಯಿಂದ ಆರ್ಥಿಕ ನೆರವು ಪಡೆಯಲು ಬಯಸುತ್ತಿದ್ದೀರಾ ಹಾಗಾದ್ರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆ ಅರ್ಜಿ ಪ್ರಾರಂಭವಾಗಿದ್ದು ಆಸಕ್ತಿ ಇರುವಂತವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ, ಗರಿಷ್ಠ 2,67,000 ವರೆಗೆ ಆರ್ಥಿಕ ನೆರವು ಸರ್ಕಾರ ಕಡೆಯಿಂದ ಪಡೆಯಬಹುದು ಹಾಗಾಗಿ ಈ ಒಂದು ಲೇಖನೆಯ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

ಕೆನರಾ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ನಿಮಗೆ ಸಾಲ ಬೇಕಾದರೆ ಈ ರೀತಿ ಅರ್ಜಿ ಸಲ್ಲಿಸಿ

 

ಪಿಎಂ ಆವಾಸ್ ಯೋಜನೆ (PM Awas Yojana).?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಮತ್ತು ರೈತ ಕುಟುಂಬಗಳಿಗೆ ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುವಂಥ ಜನರಿಗೆ ಮತ್ತು ಮನೆ ಇಲ್ಲದಂತ ಕುಟುಂಬಗಳಿಗೆ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ನೆರವು ಅಥವಾ ಉಚಿತ ಮನೆ ಕಟ್ಟಿಸುವ ಉದ್ದೇಶದಿಂದ ಪಿಎಂ ಆವಾಸ್ ಯೋಜನೆಯನ್ನು ಮುಂಜಾರಿಗೆ ತರಲಾಯಿತು.! ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಇಲ್ಲಿವರೆಗೂ ಲಕ್ಷಾಂತರ ಮನೆಗಳು ನಿರ್ಮಾಣ ಮಾಡಲಾಗಿದೆ ಆದ್ದರಿಂದ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಕಟ್ಟಿಸಿಕೊಳ್ಳಬಹುದು

PM Awas Yojana
PM Awas Yojana

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ನೀವು ಉಚಿತ ಮನೆ ಕಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಹಾಗೂ ಕೆಲವೊಂದು ದಾಖಲಾತಿಗಳು ನಿಮ್ಮ ಹತ್ತಿರ ಇರಬೇಕಾಗುತ್ತದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ಹಾಗೂ ಪಿಎಂ ಆವಾಸ್ ಯೋಜನೆ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಹಣ ಬಿಡುಗಡೆಯ ಬಗ್ಗೆ ಹೊಸ ಮಾಹಿತಿ.! ಹಣ ಬೇಕಾದರೆ ಬೇಗ ಈ ಮಾಹಿತಿ ನೋಡಿ

 

ಮನೆ ಕಟ್ಟಿಸಲು (PM Awas Yojana) ಎಷ್ಟು ಆರ್ಥಿಕ ನೆರವು ಸಿಗುತ್ತದೆ.?

ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಲು ಎಷ್ಟು ಆರ್ಥಿಕ ನೆರವು ಸಿಗುತ್ತದೆ ಎಂದು ಸಾಕಷ್ಟು ಜನರಿಗೆ ಸಂದೇಹ ಇರುತ್ತದೆ.! ಅಂತವರಿಗೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುತ್ತಿದ್ದೇವೆ.! ಸ್ನೇಹಿತರ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಎರಡು ರೀತಿಯಾಗಿ ವರ್ಗೀಕರಣ ಮಾಡಲಾಗಿತ್ತು ಮತ್ತು ಇದರ ಆಧಾರದ ಮೇಲೆ ಮನೆ ಕಟ್ಟಿಸಲು ಎಷ್ಟು ಹಣ ಸಹಾಯ ಸಿಗುತ್ತದೆ ಎಂಬುದು ನಿರ್ಧಾರವಾಗುತ್ತದೆ

ಗ್ರಾಮೀಣ ಪಟ್ಟಿ:- ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆ ಗ್ರಾಮೀಣ ಪಟ್ಟಿಯೆಂದು ವರ್ಗೀಕರಣ ಮಾಡಲಾಗಿದೆ.! ಗ್ರಾಮೀಣ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂಥ ಜನರಿಗೆ ಅವಕಾಶ ಮಾಡಿಕೊಡಲಾಗಿದ್ದು ಮತ್ತು ಈ ಗ್ರಾಮೀಣ ಪಟ್ಟಿಗೆ ಅರ್ಜಿ ಸಲ್ಲಿಸಿದಂತ ಜನರಿಗೆ ಮನೆ ಕಟ್ಟಿಸಲು ಸುಮಾರು 1,70,000 ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ ಅಥವಾ ಮನೆ ಕಟ್ಟಿಸಲು ಸಬ್ಸಿಡಿ ನೀಡಲಾಗುತ್ತದೆ ಮತ್ತು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷದವರೆಗೆ ಮನೆ ಕಟ್ಟಿಸಲು ಈ ಒಂದು ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು

ನಗರ ಪಟ್ಟಿ:- ಪಿಎಂ ಆವಾಸ ಯೋಜನೆ ಅಡಿಯಲ್ಲಿ ನಗರ ಪಟ್ಟಿಯನ್ನು ವರ್ಗೀಕರಣ ಮಾಡಲಾಗಿದೆ ಮತ್ತು ಈ ನಗರ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಲು ನಗರ ಪ್ರದೇಶಗಳಲ್ಲಿ ವಾಸ ಮಾಡುವಂತಹ ಜನರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಮತ್ತು ಈ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಿದಂತ ಜನರಿಗೆ ಗರಿಷ್ಠ 267000 ವರೆಗೆ ಮನೆ ಕಟ್ಟಿಸಲು ಆರ್ಥಿಕ ನೆರವು ನೀಡಲಾಗುತ್ತದೆ ಮತ್ತು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷದವರೆಗೆ ಮನೆ ಕಟ್ಟಿಸಲು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದು

WhatsApp Group Join Now
Telegram Group Join Now       

 

ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?

  • ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು
  • ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ಭಾರತದ ಪ್ರಜೆಯಾಗಿರಬೇಕು
  • ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮೀರಬಾರದು
  • ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರ ಕುಟುಂಬದಲ್ಲಿ ಸರಕಾರಿ ನೌಕರಿ ಹೊಂದಿರಬಾರದು
  • ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಈ ಹಿಂದೆ ಯಾವುದೇ ಸರ್ಕಾರದಿಂದ ಮನೆ ಕಟ್ಟಿಸಲು ಪಡೆದಿರಬಾರದು

 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?

  • ಅರ್ಜಿದಾರ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಇತರೆ ಅಗತ್ಯ ದಾಖಲಾತಿಗಳು

 

ಅರ್ಜಿ ಸಲ್ಲಿಸುವುದು ಹೇಗೆ (PM Awas Yojana).?

ಸ್ನೇಹಿತರ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ನೀವು ಉಚಿತ ಮನೆ ಕಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಲೀಗ್ ಕೆಳಗಡೆ ನೀಡಿದ್ದೇವೆ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ನಿಮಗೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳ ಬಗ್ಗೆ ಪ್ರತಿದಿನ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ ಇದರಿಂದ ಪ್ರತಿದಿನ ಮಾಹಿತಿ ಸಿಗುತ್ತದೆ

1 thought on “PM Awas Yojana: ಪಿಎಂ ಆವಾಸ್ ಯೋಜನೆ ಅರ್ಜಿ ಪ್ರಾರಂಭ.! ಉಚಿತ ಮನೆ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ”

Leave a Comment