Gruhalakshmi Stutas: ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣ ಒಟ್ಟಿಗೆ ₹6,000 ಬಿಡುಗಡೆ, ಲಕ್ಷ್ಮಿ ಹೆಬ್ಬಾಳ್ಕರ್

Gruhalakshmi Stutas: ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣ ಒಟ್ಟಿಗೆ ₹6,000 ಬಿಡುಗಡೆ, ಲಕ್ಷ್ಮಿ ಹೆಬ್ಬಾಳ್ಕರ್

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ ಈಗಾಗಲೇ ಫೆಬ್ರುವರಿ ತಿಂಗಳ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ ಹಾಗೂ ಮಾರ್ಚ್ ತಿಂಗಳ ಹಣ ಬಿಡುಗಡೆಯ ಹಂತದಲ್ಲಿ ಇದೆ ಹಾಗಾಗಿ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.! ಹೌದು ಸ್ನೇಹಿತರೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರಶ್ನೆ ಒಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವಂತಹ ಹಣ ಬಿಡುಗಡೆಯ ಬಗ್ಗೆ ಮಾಹಿತಿ ತಿಳಿಸಿದ್ದಾರೆ

ಯಾವುದೇ ಪರೀಕ್ಷೆ ಇಲ್ಲದೆ ತಿಂಗಳಿಗೆ 35,000 ವರೆಗೆ ಸಂಬಳ ಸಿಗುತ್ತೆ ಬೇಗ ಈ ಸರಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ

ಹಾಗಾಗಿ ಈ ಒಂದು ಲೇಖನಿಯ ಮೂಲಕ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತ ಮೂರು ತಿಂಗಳ ಹಣ ಯಾವಾಗ ಬಿಡುಗಡೆಯಾಗುತ್ತೆ ಹಾಗೂ ಹಣ ಬಿಡುಗಡೆಯ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಮಾಹಿತಿಯನ್ನು ಹಾಗೂ ಗೃಹಲಕ್ಷ್ಮಿ ಪೆಂಡಿಂಗ್ ಇರುವ ಹಣ ಪಡೆಯುವುದು ಹೇಗೆ ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಯೋಣ

 

ಗೃಹಲಕ್ಷ್ಮಿ ಯೋಜನೆ (Gruhalakshmi Stutas).?

ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಹಾಗೂ ಪ್ರಾಮುಖ್ಯತೆ ಪಡೆದ ಯೋಜನೆಯಾಗಿದೆ ಮತ್ತು ಈ ಒಂದು ಯೋಜನೆಯನ್ನು 2023 ಆಗಸ್ಟ್ ತಿಂಗಳಲ್ಲಿ ಪ್ರಾರಂಭಿಸಲಾಯಿತು.! ಹೌದು ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಈ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ವರ್ಗಾವಣೆ ಮಾಡುತ್ತಾ ಬಂದಿದೆ

WhatsApp Group Join Now
Telegram Group Join Now       
Gruhalakshmi Stutas
Gruhalakshmi Stutas

 

ಹಾಗಾಗಿ ಈ ಒಂದು ಯೋಜನೆ ಮಹಿಳೆಯರ ಅಭಿವೃದ್ಧಿ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಮತ್ತು ಪ್ರತಿ ದಿನ ಬೆಲೆ ಏರಿಕೆಯ ವಿರುದ್ಧ ಮಹಿಳೆಯರು ಸಮರ್ಥಕವಾಗಿ ಜೀವನ ನಡೆಸಲು ಬೆಂಬಲ ನೀಡುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮಾಹಿತಿ ಹಂಚಿಕೊಂಡಿದ್ದಾರೆ. ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಮಹಿಳೆಯರು ಪಡೆದುಕೊಳ್ಳುತ್ತಿದ್ದು ಕಳೆದ ಮೂರು ತಿಂಗಳಿಂದ ಹಣ ಜಮಾ ಆಗಿಲ್ಲ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ

 

ಮಹಿಳೆಯರಿಗೆ ಒಟ್ಟಿಗೆ ₹6,000 ಹಣ ಬಿಡುಗಡೆ (Gruhalakshmi Stutas).?

ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ ಮೂಲಕ ಇಲ್ಲಿವರೆಗೂ ಫೆಬ್ರುವರಿ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ ಅಂದರೆ ಇಲ್ಲಿವರೆಗೂ ಸುಮಾರು 19 ಕಂತಿನ ಹಣವನ್ನು ಮಹಿಳೆಯರು ಪಡೆದುಕೊಂಡಿದ್ದಾರೆ ಹಾಗೂ ಇನ್ನೂ ಕೆಲ ಮಹಿಳೆಯರಿಗೆ ಫೆಬ್ರವರಿ ತಿಂಗಳ ಹಣ ಜಮಾ ಆಗಿಲ್ಲ ಹಾಗಾಗಿ ಯಾವಾಗ ಮಹಿಳೆಯರು ಪೆಂಡಿಂಗ್ ಇರುವಂಥ ಎಲ್ಲಾ ಕಂತಿನ ಹಣ ಜಮಾ ಆಗುತ್ತದೆ ಎಂದು ಕೇಳುತ್ತಿದ್ದಾರೆ ಅದಕ್ಕೆ ಸಂಬಂಧಿಸಿದಂತೆ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದ್ದಾರೆ

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಯಾವಾಗ ಜಮಾ ಮಾಡುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು ಇದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಜನವರಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣವನ್ನು ಈ ಮೇ ತಿಂಗಳ ಅಂತ್ಯದ ಒಳಗಡೆ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ತಿಳಿಸಿದ್ದಾರೆ ಒಂದು ಮಾಹಿತಿ ತಿಳಿಸಿದ್ದಾರೆ ಹಾಗೂ ಈ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದೆ ಎಂದು ಮಾಹಿತಿ ತಿಳಿಸಿದ್ದಾರೆ

ಜೊತೆಗೆ ಪೆಂಡಿಂಗ್ ಇರುವಂತ ಎಲ್ಲಾ ಮೂರು ಕಂತಿನ ಹಣವನ್ನು ಒಟ್ಟಿಗೆ ಜಮಾ ಮಾಡಲು ನಾವು ಯೋಚನೆ ಮಾಡುತ್ತಿದ್ದೇವೆ ಹಾಗೂ ಇನ್ನೂ ಒಂದು ವಾರದ ಒಳಗಡೆ ಒಂದು ತಿಂಗಳ ಹಣ ಮತ್ತೊಂದು ವಾರದ ಒಳಗಡೆ ಎರಡು ತಿಂಗಳ ಹಣವನ್ನು ಜಮಾ ಮಾಡುತ್ತೇವೆ ಹಾಗೂ ಮೇ ಕೊನೆಯ ವಾರದ ಒಳಗಡೆ ಪೆಂಡಿಂಗ್ ಇರುವ ಇನ್ನೊಂದು ಕಂತಿನ ಹಣ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.!

WhatsApp Group Join Now
Telegram Group Join Now       

ಅಂದರೆ ಒಟ್ಟಿನಲ್ಲಿ ಹೇಳುವುದಾದರೆ ಈ ಮೇ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ 6000 ಹಣವನ್ನು ಈ ತಿಂಗಳು ಬಿಡುಗಡೆ ಮಾಡಲು ಹಣಕಾಸು ಇಲಾಖೆಯ ಕಡೆಯಿಂದ ಅನುಮೋದನೆ ಸಿಕ್ಕಿದೆ ಹಾಗೂ ಈ ತಿಂಗಳು ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ್ದಾರೆ ಹಾಗಾಗಿ ಇದು ಮಹಿಳೆಯರಿಗೆ ಖುಷಿ ಕೊಡುವ ವಿಷಯವಾಗಿದೆ

 

ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಏನು ಮಾಡಬೇಕು..?

ಹೌದು ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಪಡೆಯಬೇಕು ಅಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ ಕೆಲಸವನ್ನು ಸರಿಪಡಿಸಿಕೊಳ್ಳಿ ಅಂದರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹಾಗೂ ಬ್ಯಾಂಕ್ ಖಾತೆಗೆ ಈ ಕೆವೈಸಿ ಮಾಡಿಸುವುದು ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಇದರ ಜೊತೆಗೆ ಮಹಿಳೆಯರು ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ ಈಕೆ ವೈಸಿ ಮಾಡಿಸುವುದು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಮತ್ತು ಗೃಹಲಕ್ಷ್ಮಿ ಅರ್ಜಿ ಈ ಕೆ ವೈ ಸಿ ಮಾಡಿಸಬೇಕು

ಅಂದರೆ ಮಾತ್ರ ಮಹಿಳೆಯರಿಗೆ ಪೆಂಡಿಂಗ್ ಇರುವಂತ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ ಒಂದು ವೇಳೆ ನಿಮಗೆ ಐದು ಅಥವಾ ಹತ್ತು ಅಥವಾ ಇಲ್ಲಿವರೆಗೂ ಯಾವುದೇ ಕಂತಿನ ಹಣ ಜಮಾ ಆಗಿಲ್ಲ ಅಂದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ

 

ಗೃಹಲಕ್ಷ್ಮಿ ಹಣದ ಸ್ಟೇಟಸ್ ಚೆಕ್ (Gruhalakshmi Stutas) ಮಾಡುವುದು ಹೇಗೆ..?

ಗೃಹಲಕ್ಷ್ಮಿ ಹಣದ ಸ್ಟೇಟಸ್ ಚೆಕ್ ಮಾಡಲು ಮಹಿಳೆಯರು ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕರ್ನಾಟಕ DBT ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

ಇದನ್ನು ಡೌನ್ಲೋಡ್ ಮಾಡಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅಥವಾ ಕೆಳಗಡೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಈ ಒಂದು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

 

ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

  • ಮೇಲೆ ಕೊಟ್ಟಿರುವ ಅಂತ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಕರ್ನಾಟಕ ಡೆಬಿಟ್ ಸ್ಟೇಟಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಪ್ಲೇ ಸ್ಟೋರ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಿ
  • ನಂತರ ಈ ಒಂದು ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ಗೃಹಲಕ್ಷ್ಮಿ ಫಲಾನುಭವಿಯ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ಗೆ ಲಾಗಿನ್ ಆಗಿ
  • ನಂತರ ಈ ಒಂದು ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ಅಲ್ಲಿ ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಗೃಹಲಕ್ಷ್ಮಿ ಸ್ಕೀಮ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ನಿಮಗೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ವಿವರ ನೋಡಲು ಸಿಗುತ್ತದೆ

ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ

1 thought on “Gruhalakshmi Stutas: ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣ ಒಟ್ಟಿಗೆ ₹6,000 ಬಿಡುಗಡೆ, ಲಕ್ಷ್ಮಿ ಹೆಬ್ಬಾಳ್ಕರ್”

Leave a Comment