Ration Card Application: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭವಾಗಿದೆ.! ತಕ್ಷಣ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ನಾವು ಈ ಒಂದು ಲೇಖನಿಯ ಮೂಲಕ ನಿಮಗೆ ಮಾಹಿತಿ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರವು ಆಹಾರ ಇಲಾಖೆಯ ಮೂಲಕ ಇದೀಗ ರೇಷನ್ ಕಾರ್ಡ್ ಅರ್ಜಿ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ ಆದ್ದರಿಂದ ನಾವು ಈ ಲೇಖನಯ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಯಾವಾಗ ಹಾಗೂ ತಿದ್ದುಪಡಿಗೆ ಬೇಕಾಗುವ ಅಗತ್ಯ ದಾಖಲಾತಿಗಳ ವಿವರ ಮತ್ತು ಇತರ ವಿವರಗಳಿಗೆ ಸಂಬಂಧಿಸಿದಂತೆ ಈ ಲೇಖನಿಯಲ್ಲಿ ಮಾಹಿತಿ ತಿಳಿದುಕೊಳ್ಳೋಣ
ರೇಷನ್ ಕಾರ್ಡ್ ಇದ್ದವರಿಗೆ ಸಿಎಂ ಸಿದ್ದರಾಮಯ್ಯನವರು ಹೊಸ ಆದೇಶ ಹೊರಡಿಸಿದ್ದಾರೆ ತಪ್ಪದೆ ಮಾಹಿತಿ ನೋಡಿ
ರೇಷನ್ ಕಾರ್ಡ್ (Ration Card Application)..?
ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಇವತ್ತು ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಎಷ್ಟು ಮುಖ್ಯವೆಂದರೆ ಇವತ್ತು ನಮ್ಮ ಕರ್ನಾಟಕದಲ್ಲಿ ವಾಸ ಮಾಡುವಂತ ಕುಟುಂಬಗಳಲ್ಲಿ ರೇಷನ್ ಕಾರ್ಡ್ ಇದ್ದರೆ ರಾಜ್ಯ ಸರ್ಕಾರ ಕಡೆಯಿಂದ ಪ್ರತಿ ತಿಂಗಳು ಏನಿಲ್ಲ ಅಂದರು ಕನಿಷ್ಠ ₹4,000 ರಿಂದ ₹8,000 ದವರೆಗೆ ಆರ್ಥಿಕ ನೆರವು ಅಥವಾ ಹಣವನ್ನು ಪಡೆದುಕೊಳ್ಳಬಹುದು ಹಾಗಾಗಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ಇಗ ಇರುವಂತ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು ಕಾಯುತ್ತಿದ್ದಾರೆ..

ಅಂತವರಿಗೆ ಇದೀಗ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು ಹೌದು ಸ್ನೇಹಿತರೆ, ಇದೀಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸುದೀರ್ಘವಾಗಿ ಅವಕಾಶವನ್ನು ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಮಾಡಿ ಕೊಟ್ಟಿತ್ತು. ಇದೀಗ ಮತ್ತೆ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕ ಯಾವಾಗ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ರೇಷನ್ ಕಾರ್ಡ್ ತಿದ್ದುಪಡಿ ಕೊನೆಯ ದಿನಾಂಕ (Ration Card Application)..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಕಳೆದ ಮೂರು ತಿಂಗಳಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿತ್ತು ಆದರೆ ಸಾಕಷ್ಟು ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ವ ಸಮಸ್ಯೆ ಹಾಗೂ ಇತರ ಹಲವಾರು ಸಮಸ್ಯೆಗಳಿಂದ ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ..! ಅಂತವರಿಗೆ ಇದೀಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಈ ದಿನಾಂಕದ ಒಳಗಡೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕಾಗುತ್ತದೆ
ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಇದೆ 30/04/2025 ರವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಮತ್ತು ಈ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಈ ದಿನಾಂಕದ ಒಳಗಡೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ
ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಯಾವ ಬದಲಾವಣೆ ಮಾಡಲಾಗುತ್ತದೆ (Ration Card Application).?
- ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಸೇರ್ಪಡೆ
- ರೇಷನ್ ಕಾರ್ಡ್ ನಲ್ಲಿ ಸದಸ್ಯರನ್ನು ತೆಗೆದುಹಾಕುವುದು
- ಕುಟುಂಬದ ಮುಖ್ಯಸ್ಥರ ಬದಲಾವಣೆ
- ಮರಣ ಹೊಂದಿದವರನ್ನು ತೆಗೆದುಹಾಕುವುದು
- ಕುಟುಂಬದ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು
- ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ E-kyc ಮಾಡಿಸಬಹುದು
- ರೇಷನ್ ಕಾರ್ಡ್ ನಲ್ಲಿ ಇರುವ ವಿಳಾಸದ ಬದಲಾವಣೆ ಮಾಡಬಹುದು
- ರೇಷನ್ ಕಾರ್ಡ್ ನಲ್ಲಿ ಇರುವಂತ ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಬಹುದು
- ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಇತರ ಎಲ್ಲಾ ಬದಲಾವಣೆಗಳು ಮಾಡಲು ಅವಕಾಶವಿದೆ
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬೇಕಾಗುವ ದಾಖಲಾತಿಗಳು..?
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಸದಸ್ಯರ ಜಾತಿ ಪ್ರಮಾಣ ಪತ್ರ.
- ಸದಸ್ಯರ ಆದಾಯ ಪ್ರಮಾಣ ಪತ್ರ
- 06 ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಬೇಕಾಗುತ್ತದೆ
- ಮೊಬೈಲ್ ನಂಬರ್.
- ಇತರೆ ಅಗತ್ಯ ದಾಖಲಾತಿಗಳು
ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ..?
ಹೌದು ಸ್ನೇಹಿತರೆ ಸಾಕಷ್ಟು ಜನರು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಕಾಯುತ್ತಿದ್ದಾರೆ ಅಂತವರಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ರಾಜ್ಯ ಸರ್ಕಾರ ಕಡೆಯಿಂದ ಸಿಹಿ ಸುದ್ದಿ..! ಹೌದು ಸ್ನೇಹಿತರೆ, ಇದೇ 30/04/2025 ವರೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಎರಡು ಅಥವಾ ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗೂ ಈ ರೇಷನ್ ಕಾರ್ಡ್ ತಿದ್ದುಪಡಿ ಮುಗಿದ ನಂತರ ಸುಧೀರ್ಘವಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ಹೊಸ ರೇಷನ್ ಕಾರ್ಡ್ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೆಲವು ಮಾಧ್ಯಮಗಳ ಮೂಲಕ ಮಾಹಿತಿ ತಿಳಿದು ಬಂದಿದೆ
ಆದ್ದರಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಿಟ್ಟಾಗ ನಾವು ಹೊಸ ಲೇಖನೆಯ ಮೂಲಕ ನಿಮಗೆ ಮಾಹಿತಿ ತಿಳಿಸುತ್ತೇವೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ತಕ್ಷಣ ಹೊಸ ಮಾಹಿತಿ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಅರ್ಜಿ ಪ್ರಾರಂಭವಾದ ತಕ್ಷಣ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜೈನ್ ಆಗಬಹುದು ಇದರಿಂದ ತಕ್ಷಣ ಮಾಹಿತಿ ಸಿಗುತ್ತದೆ